ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ.
Мен -р---ына-оты--ы- ке--д-.
М__ о_______ о______ к______
М-н о-т-с-н- о-ы-ғ-м к-л-д-.
----------------------------
Мен ортасына отырғым келеді. 0 Mund- sı------ --r ma?M____ s_______ b__ m__M-n-a s-r-x-n- b-r m-?----------------------Munda sıraxana bar ma?
ಇನ್ನಷ್ಟು ಭಾಷೆಗಳು
ಧ್ವಜದ ಮೇಲೆ ಕ್ಲಿಕ್ ಮಾಡಿ!
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ.
ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ.
ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ.
ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ.
ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ.
ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ.
ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ).
ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ.
ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ.
ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ.
ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು.
ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ.
ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ.
ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ.
ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ.
ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ.
ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ.
ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು.
ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ.
ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು.
ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು.
ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು.
೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು.
ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ.
೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.
ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.
ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ.
ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ.
ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.