А--р---тбол -----б-луп -а-а-.
А___ ф_____ о___ б____ ж_____
А-ы- ф-т-о- о-н- б-л-п ж-т-т-
-----------------------------
Азыр футбол оюну болуп жатат. 0 Me--sp--------una-bar--.M__ s____ k______ b_____M-n s-o-t k-u-u-a b-r-m-------------------------Men sport klubuna baram.
ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ.
ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು.
ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ.
ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ.
ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ.
ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು.
ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು.
ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು.
ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು.
ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು.
ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು.
ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ.
ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ.
ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ.
ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು.
ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್.
ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ.
ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು.
ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ.
ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ.
ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ .
ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ.
ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ.
ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ.
ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ.
ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು.
ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು.
ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....