Мен -ат о--- --т----.
М__ к__ о___ ж_______
М-н к-т о-у- ж-т-м-н-
---------------------
Мен кат окуп жатамын. 0 Men-k---o-u- --t--ın.M__ k__ o___ j_______M-n k-t o-u- j-t-m-n----------------------Men kat okup jatamın.
М-н -ат жаз-п жата--н.
М__ к__ ж____ ж_______
М-н к-т ж-з-п ж-т-м-н-
----------------------
Мен кат жазып жатамын. 0 M-n-kat-jaz------am--.M__ k__ j____ j_______M-n k-t j-z-p j-t-m-n-----------------------Men kat jazıp jatamın.
ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ.
ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ.
ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ.
ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ.
ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ.
ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ.
ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ.
ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ.
ಭೌಗೋಳಿಕ ಗಡಿಗಳೂ ಇಲ್ಲ.
ಭಾಷಾ ಗಡಿಗಳಂತು ಇಲ್ಲವೆ ಇಲ್ಲ.
ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ.
ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ.
ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ.
ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ.
ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ.
ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ.
ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ.
ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು.
ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ.
ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ.
ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ.
ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ.
ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ.
ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ .
ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ.
ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ.
ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ.
ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.