큰 거 아니면 작은 --?
큰 거 아__ 작_ 거__
큰 거 아-면 작- 거-?
--------------
큰 거 아니면 작은 거요? 0 ha-i-a- n-om--bi---n g--n--n----o.h______ n____ b_____ g___ a_______h-j-m-n n-o-u b-s-a- g-o- a-i-o-o-----------------------------------hajiman neomu bissan geon anigoyo.
ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ.
ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ.
ಆದರೆ ಅದು ಒಂದೆ ಭಾಷೆಯಲ್ಲ.
ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು.
ಅದು ಹಲವು ಬಾರಿ ಕಷ್ಟಕರ.
ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ.
ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ.
ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು.
ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ.
ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು.
ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ.
ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು.
ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ.
ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು.
ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ.
ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು.
ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.
ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು.
ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ.
ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ.
ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು.
ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು.
ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು.
ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು.
ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ.
ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ.
ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ.
ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.