Η π-ώ-- μ----ε--α- -----τέ--.
Η π____ μ___ ε____ η Δ_______
Η π-ώ-η μ-ρ- ε-ν-ι η Δ-υ-έ-α-
-----------------------------
Η πρώτη μέρα είναι η Δευτέρα. 0 Ē---ṓ-ē m--a-eí--i-ē --u-é-a.Ē p____ m___ e____ ē D_______Ē p-ṓ-ē m-r- e-n-i ē D-u-é-a------------------------------Ē prṓtē méra eínai ē Deutéra.
ವರ್ತಮಾನ ಕಾಲದಲ್ಲಿ ಆಂಗ್ಲ ಭಾಷೆ ಪ್ರಪಂಚದಲ್ಲಿ ಅತಿ ಮುಖ್ಯ.
ಇದರ ಮೂಲಕ ಎಲ್ಲಾ ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು.
ಆದರೆ ಬೇರೆ ಭಾಷೆಗಳು ಕೂಡ ಈ ಗುರಿಯನ್ನು ತಲುಪಲು ಇಷ್ಟಪಡುತ್ತವೆ.
ಉದಾಹರಣೆಗೆ ಸಂಯೋಜಿತ ಭಾಷೆಗಳು.
ಸಂಯೋಜಿತ ಭಾಷೆಗಳನ್ನು ಉದ್ದೇಶಪೂರ್ವಕವಾಗಿ ವಿಕಸಿಸಿ ವೃದ್ಧಿ ಪಡಿಸಲಾಗುವುದು.
ಅಂದರೆ ಒಂದು ಧ್ಯೇಯವನ್ನು ಇಟ್ಟುಕೊಂಡು ಅದಕ್ಕೆ ಅನುಗುಣವಾಗಿ ರಚಿಸಲಾಗುತ್ತದೆ.
ಸಂಯೋಜಿತ ಭಾಷೆಗಳಿಗೆ ಬೇರೆ ಬೇರೆ ಭಾಷೆಗಳಿಂದ ಘಟಕಗಳನ್ನು ಸೇರಿಸಲಾಗುತ್ತದೆ.
ಇದರ ಮೂಲಕ ಎಲ್ಲಾ ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗ ಬೇಕು.
ಎಲ್ಲಾ ಸಂಯೋಜಿತ ಭಾಷೆಗಳ ಧ್ಯೇಯ ಎಂದರೆ ಅಂತರರಾಷ್ಟ್ರೀಯ ಸಂವಾದ.
ಅತಿ ಪ್ರಖ್ಯಾತವಾದ ಸಂಯೋಜಿತ ಭಾಷೆ ಎಂದರೆ ಎಸ್ಪೆರಾಂಟೋ.
ಈ ಭಾಷೆಯನ್ನು ೧೮೮೭ ರಲ್ಲಿ ಮೊದಲ ಬಾರಿಗೆ ವಾರ್ಸಾದಲ್ಲಿ ಪರಿಚಯಿಸಲಾಯಿತು.
ಇದನ್ನು ಸಂಸ್ಥಾಪಿಸಿದವರು ಲುಡ್ವಿಕ್ ಎಲ್ ಜಾ಼ಮೆನಹೋಫ್ ಎಂಬ ವೈದ್ಯರು.
ಅವರು ಅರ್ಥಮಾಡಿಕೊಳ್ಳುವುದರಲ್ಲಿ ಇರುವ ಕಷ್ಟಗಳು ಕಲಹಗಳಿಗೆ ಮುಖ್ಯ ಕಾರಣವೆಂದು ಅರಿತರು.
ಇದರಿಂದ ಅವರು ಎಲ್ಲಾ ಜನಾಂಗಗಳನ್ನು ಒಂದುಗೂಡಿಸುವ ಭಾಷೆಯನ್ನು ರಚಿಸಲು ಬಯಸಿದರು.
ಈ ಭಾಷೆಯನ್ನು ಎಲ್ಲಾ ಜನರು ಸರಿಸಮಾನರಂತೆ ಮಾತಾಡುವ ಅವಕಾಶ ಇರುತ್ತದೆ.
ಆ ವೈದ್ಯರ ಗುಪ್ತನಾಮ ಎಸ್ಪೆರಾಂಟೋ, ಅಂದರೆ ಆಶಾವಾದಿ.
ಇದು ಅವರು ತಮ್ಮ ಕನಸಿನ ಬಗ್ಗೆ ಇಟ್ಟು ಕೊಂಡಿದ್ದ ನಂಬಿಕೆಯನ್ನು ತೋರಿಸುತ್ತದೆ.
ವಿಶ್ವವ್ಯಾಪಿ ತಿಳಿವಳಿಕೆಯ ಉದ್ದೇಶ ಇನ್ನೂ ಹಳೆಯದು.
ಇಲ್ಲಿಯವರೆಗು ಹಲವಾರು ಸಂಯೋಜಿತ ಭಾಷೆಗಳನ್ನು ವೃದ್ದಿ ಪಡಿಸಲಾಗಿದೆ.
ಇವುಗಳ ಜೊತೆ ಸಹಿಷ್ಣುತೆ ಮತ್ತು ಮಾನವ ಹಕ್ಕುಗಳಂತಹ ಬೇರೆ ಗುರಿಗಳನ್ನು , ಸೇರಿಸಲಾಗುತ್ತದೆ.
ಎಸ್ಪೆರಾಂಟೊವನ್ನು ೧೨೦ಕ್ಕಿಂತ ಹೆಚ್ಚುದೇಶಗಳಲ್ಲಿ ಜನರು ಬಳಸುತ್ತಾರೆ.
ಎಸ್ಪೆರಾಂಟೊ ವಿರುದ್ಧ ಟೀಕೆಗಳೂ ಸಹ ಇವೆ.
ಉದಾಹರಣೆಗೆ ಶೇಕಡ ೭೦ ಕ್ಕಿಂತ ಹೆಚ್ಚಿನ ಪದಗಳು ರೊಮಾನಿಕ್ ನಿಂದ ಉಗಮವಾಗಿವೆ.
ಹಾಗೂ ಎಸ್ಪೆರಾಂಟೊ ಇಂಡೊ-ಜರ್ಮನ್ ಭಾಷೆಗಳಿಂದ ರೂಪುಗೊಂಡಿದೆ.
ಮಾತುಗಾರರು ತಮ್ಮ ಅಭಿಪ್ರಾಯಗಳನ್ನು ಸಭೆ ಮತ್ತು ಸಂಸ್ಥೆಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ.
ಕ್ರಮಬದ್ಧವಾಗಿ ಕಮ್ಮಟಗಳನ್ನು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ.
ಆಹಾ! ನಿಮಗೂ ಎಸ್ಪೆರಾಂಟೊ ಮಾತನಾಡುವ ಆಸೆ ಉಂಟಾಯಿತೆ?
Ĉu vi parolas Esperanton? – Jes, mi parolas Esperanton tre bone!